Friday, 30 January 2015

ನಿಜವಾದೆನೆ ನಾ ನಿನ್ನೊಳಗೆ?


ನೀ ಅರಳಿದಾಗ ಘಮ್ಮೆಂದ ಮಲ್ಲಿಗೆ
ಸೇವಿಸಿದಷ್ಟೂ ಸುಘ್ರಾಣಿಸಿತು
ಅಧರ ಮಧುರ ಹಿತವಾದ ನಿನ್ನಪ್ಪುಗೆ
ನಿಜವಾದೆನೆ ನಾ ನಿನ್ನೊಳಗೆ?

ನೀ ಮಾಗಿದಾಗ ಕಾಯಾದ ಮೊಗ್ಗು
ಸವಿದಷ್ಟೂ ಹೆಚ್ಚು ಸಿಹಿಯಾಯಿತು
ಮಡಿಲಾದ ಮನಸು ಹಿಡಿಯಾದ ಕನಸು
ನಿಜವಾದೆನೆ ನಾ ನಿನ್ನೊಳಗೆ?

ನೀ ನಲುಗಿದಾಗ ಝಲ್ಲೆಂದೀ ಎದೆ
ಬಿಗಿಯಾದಷ್ಟೂ ಛಳಕ್ಕೆಂದಿತು
ದೂರಾಗುವ ಭಾವ ಕಳೆವೆ ಎಂಬ ಜೀವ
ನಿಜವಾದೆನೆ ನಾ ನಿನ್ನೊಳಗೆ?

ಮುಖಕ್ಕೆ ಚುಮ್ಮಿಡೋ ಹದವಾದ ಗಾಳಿ ನೀನಾಗಬೇಡ
ತನಕ್ಕೆ ತಂಪನ್ನೆರೆಯುವ ಶೀತಲ ನೀರಾಗಬೇಡ
ಅದೇ ಭಕುತಿ ಭಾವ ಅದೇ ಪ್ರೀತಿ ಪ್ರಣಯ ನೀಡು ಸದಾ
ನೀ ನನ್ನ ಸೆಳೆದ ಬರೀ ಕ್ಷಣದಲ್ಲಿ ನಿಜವಾದೆ ನಾ ನಿನ್ನೊಳಗೆ...