Thursday, 2 August 2018

ಪಯಣ

ಕಳೆದ ದಾರಿ ಹಳಿದ ದಾರಿ ಜರೆದ ದಾರಿ
ಮುನಿದ ದಾರಿ ತಿರುಗಿ ತಿರುಗಿ ನೋಡಲುಂಟೇ
ಅಯ್ಯೋ ಬೇಡವೆಂದಿತು ಮನ ಸುಮ್ಮನ್ನಿರು

ಸಾವಿರಾರು ಮಾತು ಹತ್ತಾರು ಕಥೆ ನೂರೆಂಟು ವಿಚಾರ 
ತುಮುಲ ತಿಮಿರ ತುಂಬಿದ ಈ ಜಡ ದೇಹ
ಮುಂದೊಮ್ಮೆ ಮಣ್ಣಾಗುದಲ್ಲವೇ ಅಣ್ಣತಮ್ಮ

ಮತ್ತೇಕೆ ಥಳಿತ ತಿವಿತ ಮತ್ತೇಕೆ ಮದ ಮಾತ್ಸರ್ಯ 
ಬೇಡೆಂದರೂ ಮನಸ್ಸಿಗೆ ಒಗ್ಗದಿದ್ದರು
ಅದು ಪಿತ್ತವಾಗಿ ಇಡೀ ಜೀವ ಹಣ್ಣು ಮಾಡಿಸಿದೆ

ಆದರೇನು ಅಲ್ಲೊಂದು ಸುಖದ ಸೆಲೆ ಅತೃಪ್ತ ಆಸೆ 
ಮರೀಚಿಕೆಯಂತೆ ಕರೆಯುತಿದೆಯಲ್ಲ
ಹಳೇದನ್ನು ಮರಿ ಇವತ್ತನ್ನ ಕಲಿ ನಾಳೆ ಒಳಿತೇ 
ಎಂದು ಅದರೆಡೆ ಪಯಣಿಸುತ್ತಿರುವೆ !

No comments:

Post a Comment