ಕಥೆ ಹೇಳುವೆ ಒಂದು ಕಾಲದ ಕಥೆ ಹೇಳುವೆ
ಯಾವಾಗ ಊರಿಗೂರೇ ಮಲಗಿತ್ತು ಆ ರಾತ್ರಿ ಸುಖವಾಗಿ
ನಾಲ್ಕೂ ದಿಕ್ಕುಗಳಲ್ಲಿ ಸೂರ್ಯಾಸ್ತದ ಕೆಂಪೇರಿತ್ತು
ಪ್ರೇರಣಾತ್ಮ ಶಾಲು ಹೊದ್ದು ರಕ್ತದೋಕುಳಿಯಲ್ಲಿ ಮಿಂದಿತ್ತು
ಎಲ್ಲೆಲ್ಲೂ ಕೆಂಪು ಪುಡಿ ಬಣ್ಣವ ಎರಚ್ಚಿತ್ತು
ಅಷ್ಟರಲ್ಲಿ ದೊಡದ್ದೊಂದು ವಿಪತ್ತು ಬಂದಿತ್ತು
ಯಾವ ರಾತ್ರಿ ಮುಗಿಲಿನಿಂದ ರಕ್ತ ಸುರಿದಿತ್ತು
ಯಾವ ರಾತ್ರಿ ಊರಲ್ಲಿ ರಕ್ತ ಹರಿದಿತ್ತು
ಇಡೀ ಊರೇ ಒದ್ದೆಯಾಯಿತು ಧರೆಯಲ್ಲಿ ವೃಷ್ಟಿಯಾಯ್ತು
ಮಾನವೀಯತೆ ತೋಯ್ದು ತೊಪ್ಪೆಯಾಯಿತು
ಇಡೀ ಜಗತ್ತೇ ಕೇಳಿತು ಇಷ್ಟೆಲ್ಲಾ ಆಗುವಾಗ ಅಣ್ಣತಮ್ಮಂದಿರಾ, ನಿಮ್ಮ ಊರು ಕಣ್ಮುಚ್ಚಿ ಯಾಕೆ ಮಲಗಿತ್ತು
ಊರಿಗೂರೇ ಹೇಳಿತು ನಿದ್ದೆ ಅಷ್ಟು ಜೋರಿತ್ತು
ಯಾವ ರಾತ್ರಿ ಮುಗಿಲಿನಿಂದ ರಕ್ತ ಸುರಿದಿತ್ತು
ಯಾವ ರಾತ್ರಿ ಊರಲ್ಲಿ ರಕ್ತ ಹರಿದಿತ್ತು
ಮೌನ ಒಂಟಿಯಾಗಿತ್ತು ಅಜ್ಞಾತ ನಿಶಬ್ದತೆ
ಜೀವ ಹಿಂಸಾತ್ಮಕ ತಿರುವು ಪಡೆಯಿತು
ಅದೆಷ್ಟೋ ಸಂಖ್ಯೆಯಲ್ಲಿ ನೆರಳುಗಳು ಬಿದ್ದವು
ತಮ್ಮ ಜಡ್ಡು ಕೂದಲು ಕೆದರಿಕೊಂಡು
ಪಿಶಾಚಿಗಳಿಂದ ಅಂಧಕಾರ ಹೆಚ್ಚಿತು
ಜೀವ ಪೈಶಾಚಿಕ ನ್ರತ್ಯದಿಂದ ಕಂಪಿಸಿತು
ಅಲ್ಲೆಲ್ಲೋ ಚಪ್ಪಲಿ ಕಟಕಟ ಮಾಡುತ್ತಿದೆ
ಅಲ್ಲೆಲ್ಲೋ ಕೆಂಡ ಚಟಪಟ ಸುಡುತ್ತಿದೆ
ಇಲ್ಲೆಲ್ಲೋ ಜೀರುಂಡೆಯ ಜೀಗುಡೋ ಶಬ್ಧ
ಅಲ್ಲೆಲ್ಲೋ ನಳದಿಂದ ನೀರು ಟಪಟಪ ಬೀಳುತಿದೆ
ಅಲ್ಲೆಲ್ಲೋ ಖಾಲಿ ಖಾಲಿ ಕಿಟಕಿಗಳಿವೆ
ಅಲ್ಲೆಲ್ಲೋ ಕಪ್ಪಾದ ಹೊಗೆಗೊಳವೆ
ಇಲ್ಲೆಲ್ಲೋ ಗುಂಪಾಗಿ ನಲುಗುತ್ತಿರುವ ಮರಗಳು
ಇಲ್ಲೆನನ್ನೋ ಮಾಡಿನ ಗೋಡೆಯೊಳಗಡೆ ಇಡಲಾಗಿದೆ
ರೇ ರೇ ರೆ ರೇರೆ...
ಶೂನ್ಯ ತುಂಬಿದ ಕತ್ತಲೆ ದಾರಿ ಕೊನೆಯಲ್ಲಿ ಬೀದಿ ನಾಯಿ ಕೂಗಿದಾಗ
ಮಸುಕಾದ ಹಳದಿ ದಾರಿದೀಪದ ಕೆಳಗೆ ಏನೇನೋ ನಡೆದಾಗ
ಯಾವುದೋ ನೆರಳು ತನ್ನಿರವನ್ನು ಬಚಾವು ಮಾಡುತ್ತಾ ಬೇರಾವುದೋ ನೆರಳಲ್ಲಿ ಕಳೆದು ಹೋದಾಗ
ಸೇತುವೆಯ ಕಂಬಗಳನ್ನ ಕಾರಿನ ಬಿಸಿದೀಪ ನಿಧಾನವಾಗಿ ತೊಳೆದಾಗ
ನಮ್ಮೂರು ನಿದ್ದೆ ಮಾಡುತ್ತದೆ
ಘಾಡವಾಗಿ ನಿದ್ದೆ ಮಾಡುತ್ತದೆ
ಮೈಮರೆತು ನಿದ್ದೆ ಮಾಡುತ್ತದೆ
ಯಾವಾಗ ಊರು ನಿದ್ದೆ ಮಾಡುತ್ತದೆ ಆಗ ನಿಮಗೆ ಗೊತ್ತೇ ಏನೇನು ಆಗುತ್ತದೆ
ಇಲ್ಲಿ ಶವಗಳು ಜೀವಂತ ಇಲ್ಲಾ ಸತ್ತು ಏಳುತ್ತವೆ
ಅಲ್ಲಿ ಜೀವಗಳು ಕಳೆಯುತ್ತವೆ
ಇಲ್ಲಿ ಧರ್ಮದ ಭಿಕ್ಷೆ ಬೇಡುವ ಕೂಗು ಕೇಳುತ್ತದೆ
ಆ ಆಸ್ಪತ್ರೆಯಲ್ಲಿ ಕಣ್ಣಲ್ಲಿ ನಿಯಂತ್ರಣ ತಪ್ಪಿದ ಮರುಕ್ಷಣವೇ ಬಿಸಿಯಾದ ಮಾಂಸದ ಮುದ್ದೆ ಕೈಯಲ್ಲಿ ಬೀಳುತ್ತದೆ
ಇಲ್ಲಿ ಮೈಮಾರಾಟದ ಜಟಾಪಟಿ ಕೊಳ್ಳುವಿಕೆಯಲ್ಲಿ ತಕರಾರು ಎದ್ದಿದೆ
ಅಲ್ಲಿ ಕಣ್ಣುಗಳೆರಡು ರಕ್ತಸಿಕ್ತ ಗಾಯಗಳನ್ನು ನಿಂತು ನೋಡುತ್ತಿವೆ
ಇದರಿಂದಾಗಿ ರಂಗುರಂಗಿನ ಅರಮನೆಗಳಲ್ಲಿ ಸಂಭಾವನೆ ಸಿಗುತ್ತದೆ
ನಶೆಯಲ್ಲಿರುವ ಜಗುಲಿಗಳಲ್ಲಿ ಕ್ರೂರ ಜೋಕು ಹುಟ್ಟುತ್ತದೆ
ಅರೆನಗ್ನ ದೇಹಗಳ ದುರ್ಗಂಧ ಸುಂದರ ಲಿಪಿಯಂತೆ ತೋರುತ್ತದೆ
ಅಂಡೆಪಿರ್ಕಿ ಮುಖಗಳಲ್ಲಿ ಕೆಡುಕು ಮಾಡುವ ಆಸೆ ಕಾಣುತ್ತದೆ
ಅವರು ಗಾಬರಿಯಾಗಿ ಯಾವಾಗೆಲ್ಲ ಹೀಗಾಗುತ್ತದೆ ಅಂದಾಗ
ನಾವು ಹೇಳುತ್ತೇವೆ ಹೀಗಾಗುತ್ತದೆ ಯಾವಾಗ್ಯಾವಾಗ
ನಮ್ಮೂರು ನಿದ್ದೆ ಮಾಡುತ್ತದೆ
ಘಾಡವಾಗಿ ನಿದ್ದೆ ಮಾಡುತ್ತದೆ
ಮೈಮರೆತು ನಿದ್ದೆ ಮಾಡುತ್ತದೆ
ಹಿಂದಿ ಮೂಲ : ಪಿಯೂಷ್ ಮಿಶ್ರ
ಕನ್ನಡ ಅನುವಾದ : ಶಿಲ್ಪ ಶಾಸ್ತ್ರಿ

No comments:
Post a Comment