Thursday 2 August 2018

ಕುದುರೆ ಸರದಾರ

ಬಿಳಿ ಕುದುರೆ ಏರಿ ಒಮ್ಮೆ ಬಂದುಬಿಡು ಸರದಾರ ಕಾಯುತಿರುವೆ ಮದರಂಗಿ ಹಚ್ಚಿ
ರೂಪು ರೇಷೆ ಹಮ್ಮು ಬಿಮ್ಮು ಎಲ್ಲಾ ತೊರೆದು
ತಪಸ್ಸು ಕುಳಿತಿರುವೆ ಪ್ರಣಯಿನಿಯಂತೆ

ನಿನ್ನೊಂದು ಕುಡಿನೋಟ ಸಾಕು
ಮೃದು ಹೃದಯ ಕಂಪಿಸಲು
ನಾನೆಲ್ಲಿ ದುಂಬಾಲು ಬಿದ್ದು ನಿನ್ನ ಬಿಸಿಯಪ್ಪುಗೆ
ಹಿತ ಬಯಸುವೆ ಎಂಬ ಹೆದರಿಕೆಯೇ?

ತಲೆಯಲ್ಲಿ ಬರಿಯ ಪ್ರೇಮಕಥೆ ಹೆಣೆಹೆಣೆದು
ನಿಷೆಯಲ್ಲಿ ಸುಂದರ ಹೊಂಗನಸು ಕಂಡು ಸಾಕಾಗಿದೆ
ಸಪ್ತಸೂಪ್ತ ಸಾಗರಗಳಾಚೆ ಕಾಡುಮೇಡು ಬಾನುಭುವಿ ತಿರುಗಿಸಲು
ಒಂದೊಮ್ಮೆ ನನ್ನ ಬಳಿ ಬಾರೆಯ?

ಹೊನ್ನು ಗಿನ್ನು ವಜ್ರ ಹವಳ ನಾ ಕೇಳುವವಳಲ್ಲ
ನಿನ್ನ ಹಿಡಿತವೇ ನನಗೊಪ್ಪಿಗೆ
ಮುತ್ತು ರತ್ನ  ನಿನ್ನ  ಬಂಗಾರದ ಗಿಳಿ ನಾನಾಗುವೆ
ದಾರಿ ತಪ್ಪದೆ ನನ್ನಲ್ಲಿಗೊಮ್ಮೆ ಬಂದುಬಿಡು ಕಿನ್ನರ !

No comments:

Post a Comment