ಚಂದ್ರನ ಮದುವೆಗೆ ಹೊತ್ತು ಗೊತ್ತಾಗಿದೆ
ಬೆಳದಿಂಗಳ ರಾತ್ರಿ ಮದುವಣಗಿತ್ತಿಯಂತೆ ಸಜ್ಜಾಗಿದೆ
ತಾರೆಗಳು ಮೆರವಣಿಗೆಯಲ್ಲಿ ನಡೆದು ಬರುತ್ತಿವೆ
ಚಕೋರ ಪಕ್ಷಿ ತನ್ನ ಉಪಸ್ಥಿತಿಯನ್ನು ಸಾರಿದೆ
ಶಶಿಯು ನಭದಲ್ಲಿ ಕಪ್ಪುಬಿಳಿ ಮೋಡಗುದುರೆಯನ್ನೇರಿ ಬರುತ್ತಿದ್ದಾನೆ
ಎಂದೂ ಇಲ್ಲದ ನಗು, ತನ್ನ ಯೌವ್ವನವನ್ನು ಇಮ್ಮಡಿಗೊಳಿಸಿದ್ದಾನೆ
ಪ್ರಣಯ ಪಕ್ಷಿಗಳೆರಡು ಗುಡ್ಡದೆತ್ತರದಲ್ಲಿ ಈ ಚೆಲುವ ಸವಿಯುತ್ತಿವೆ
ಸಂಸಾರವೊಂದು ಮನೆಯ ಮಹಡಿಯ ಮೇಲೆ ಬೆಳದಿಂಗಳ ರಾತ್ರಿಯ ಫಲಾಹಾರ ಸೇವಿಸುತ್ತಿದೆ
ಗುಂಡಗಿನ ಒಬ್ಬಟ್ಟಿನಂತಿರುವ ಚಂದಿರನಲ್ಲಿ ಅಲ್ಲಲ್ಲಿ ಕಲೆಯೆಂದು ತೋರಿಸುತ್ತಿದ್ದಾನೆ ಕುಡುಕನೊಬ್ಬ
ಪರಿಪೂರ್ಣ ವ್ಯಕ್ತಿತ್ವ ಲೋಪದೋಷವಿಲ್ಲದೆ ಇರಲು ಯಾರಿಂದಾದರು ಸಾಧ್ಯವೇ?
ಈ ತಂಪು ಸದಾ ನಮ್ಮ ಜೀವನದಲ್ಲಿರಲಿ
ರಾತ್ರಿ ಸರಿದು ನಭೋಕಿರಣ ನವೋಲ್ಲಾಸ ಮೂಡುತಿದೆ
-ಶಿಲ್ಪ ಶಾಸ್ತ್ರಿ
"ಪರಿಪೂರ್ಣ ವ್ಯಕ್ತಿತ್ವ ಲೋಪದೋಷವಿಲ್ಲದೆ ಇರಲು ಯಾರಿಂದಾದರು ಸಾಧ್ಯವೇ?" ಇಷ್ಟವಾಯಿತು
ReplyDelete